ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ನಿರ್ದೇಶನದಲ್ಲಿ ಶ್ರೀ ಜಿ. ರಾಘವೇಂದ್ರ ಮಯ್ಯ ನಿರೂಪಿಸಿ, ಶ್ರೀ ಪ್ರಕಾಶ್ ಶೆಟ್ಟಿ ಶೇರ್ಡಿಮನೆ ಅರ್ಪಿಸುವ, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಥಾನ , ಶೃಂಗೇರಿ ಚಿತ್ರಿಸಿರುವ 'ಕಾಳಿಂಗ ನಾವಡ ನೆನಪಿನ ನಾವೆ' - ಕಾಳಿಂಗ ನಾವಡರ ಯಶೋಗಾಥೆಯ ಪ್ರಪ್ರಥಮ ವೀಡಿಯೊ ಸಾಕ್ಷ್ಯಚಿತ್ರದ (ವೀಡಿಯೊ) ಜೊತೆಗೆ ಶ್ರೀ ಆರ್ ಜಿ ಭಟ್, ಹುಬ್ಬಳ್ಳಿ ಅರ್ಪಿಸುವ 'ಕಾಳಿಂಗ ನಾವಡರಿಗೆ ರಾಘವೇಂದ್ರ ಮಯ್ಯರಿಂದ ಗಾನ ನಮನ' (ಆಡಿಯೋ ) ಒಳಗೊಂಡಿರುವ 'ಸಿಡಿ'ಯು ಕ್ಯಾಸೆಟ್ ಕಾರ್ನರ್, ಅದಮಾರು ಮಠದ ಹತ್ತಿರ, ಉಡುಪಿ - 576 101 , ದೂ: 0820 -2527148 ಹಾಗೂ ಕ್ಯಾಸೆಟ್ ಕಾರ್ನರ್, ನಂ. 138, ಗಜೇಂದ್ರ ಕಾಂಪ್ಲೆಕ್ಸ್, ಶ್ರೀನಗರ ಅಪೆಕ್ಸ್ ಬ್ಯಾಂಕ್ ಬಸ್ ನಿಲ್ದಾಣದ ಹತ್ತಿರ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು - 560 050 , ದೂ: 98452 15995, ಇಲ್ಲಿ ಲಭ್ಯವಿದ್ದು, ಕಲಾಭಿಮಾನಿಗಳು ಇದನ್ನು ಖರೀದಿಸುವುದರ ಮೂಲಕ ಈ ವಿಶೇಷವಾದ ಹಾಗೂ ಅಪರೂಪವಾದ 'ಸಿಡಿ'ಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ರಮೇಶ್ ಬೇಗಾರ್, ದೂ: 94481 01708.
Wednesday, December 28, 2011
Friday, November 25, 2011
ನಮ್ ಕಡೆ ಸಾಂಬಾರ್ ಅಂದ್ರೆ ನಿಮ್ ಕಡೆ ತಿಳಿಯಕಿಲ್ಲ !
ನಮ್ ಕಡೆ ಸಾಂಬಾರ್ ಅಂದ್ರೆ ನಿಮ್ ಕಡೆ ತಿಳಿಯಕಿಲ್ಲ !
__________________________________________________________________________________
ಆಡು ಮುಟ್ಟದ ಸೊಪ್ಪಿಲ್ಲ, ಬೆಂಗಳೂರಿನಲ್ಲಿ ಆಡದ ಭಾಷೆಯಿಲ್ಲ. ಬೆಂಗಳೂರಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತಿನಿಂದ ಅಸ್ಸಾಮಿನವರೆಗೂ ಎಷ್ಟು ಭಾಷೆಗಳಿವೆಯೋ ಅಷ್ಟೂ ಇವೆ. ಅಷ್ಟೇ ಏಕೆ, ಪ್ರಪಂಚದ ನಾನಾ ಭಾಗದ ಭಾಷೆಗಳೂ ಇವೆ. ಇದೊಂದು 'ಬಹುರಾಷ್ಟ್ರೀಯ ಭಾಷಾಕೆಂದ್ರ' ಎಂದರೂ ತಪ್ಪಾಗಲಾರದು. ಇಷ್ಟೆಲ್ಲಾ ಭಾಷೆಗಳ ಮಧ್ಯೆ ಬೆಂಗಳೂರಿನದೇ ಅದ ಕನ್ನಡ-ಇಂಗ್ಲಿಷ್ ಮಿಶ್ರಿತ ಸ್ಥಳೀಯ ಭಾಷೆಯೊಂದಿದೆ. ಅದರ ಕೆಲವು ಉದಾಹರಣೆಗಳನ್ನು ನೋಡೋಣ :
ಮೇಷ್ಟ್ರು: ಏನಪ್ಪಾ ರಾಜಾ, ಹೋಂ ವರ್ಕ್ ಮಾಡ್ಕೊಂಡು ಬಾ ಅಂದ್ರೆ ಹಾಗೇ ಬಂದಿದೀಯ, ಯಾಕೆ ??
ವಿದ್ಯಾರ್ಥಿ: ಇಲ್ಲಾ ಸಾರ್, ನಮ್ಮಪ್ಪ ನೆನ್ನೆ ಆಚೆ ಹೋಗಿದ್ರು, ಅದಕ್ಕೆ ಮಾಡಕ್ಕಾಗಿಲ್ಲ !
ಕಂಡಕ್ಟರ್: ರೀ ಸ್ವಾಮಿ, ಹೇಳಿದ್ದು ಅರ್ಥ ಆಗಲ್ವ, ಚಿಲ್ರೆ ಕೊಡಿ, ಇದೆ ಫಸ್ಟ್ ಟ್ರಿಪ್ಪು, ಈಗ ಡಿಪೋ ದಿಂದ ಬರ್ತಾ ಇರಾದು.
ಪ್ರಯಾಣಿಕ: ಇಲ್ಲಾ ಸಾರ್, ಇದ್ದಿದ್ರೆ ನಾನ್ಯಾಕ್ ಇಟ್ಕಣನ? ಆಗಲೇ ಕೊಡ್ತಿದ್ದೆ.
ಕಾಲೇಜು ವಿದ್ಯಾರ್ಥಿ: ಲೋ ಮಗಾ, ಇವತ್ತು ಕ್ಲಾಸಿಗೆ ಬಂಕ್ ಹಾಕಿ ಫಿಲಮ್ಮಿಗೆ ಹೋಗಾನ ಅಂತ ಸ್ಕೆಚ್ ಹಾಕಿದಿನಿ. ಡೀಲಾ ?
ಸ್ನೇಹಿತ: ಅಯ್ಯೋ ನಿನ್ನ ಲೇಯ್, ಲೋ ಸಿಸ್ಯಾ, ಬ್ಯಾಡ ಕಣೋ, ನಂಗೆ ಫುಲ್ ಡೋಸಾಗ್ತಿದೆ, ನಮ್ಮಪ್ಪನಿಗೆ ಗೊತ್ತಾದ್ರೆ ಯಾವ ರೇಂಜ್ ನಲ್ಲಿ ಉಗೀತಾರೆ ಗೊತ್ತಾ ?
ಆಫೀಸ್ ಕ್ಲರ್ಕ್: ನಮ್ಮ ಬಾಸು ದೊಡ್ಡ ಕಿರಿಕ್ ಪಾರ್ಟಿ, ಸುಮ್ನೆ ಸಣ್ಣ ವಿಷಯಕ್ಕೆ ದೊಡ್ಡ ಬಿಲ್ಡ್ ಅಪ್ ಕೊಟ್ಟು ಸೀನ್ ಕ್ರಿಯೇಟ್ ಮಾಡ್ತಾರೆ.
ಆಫೀಸ್ ಬಾಯ್: ಏನಿಕ್ಕೆ ಸುಮ್ನೆ ಖರಾಬಾಗಿ ಉಗಿಸ್ಕೊಳ್ಳೋದು, ಬೆಳಾಗಿಂದ ಗುರ್ ಗುರ್ ಅಂತಿದಾರೆ.
ರಿಯಲ್ ಎಸ್ಟೇಟ್ ಏಜೆಂಟ್: ಈವಾಗ ನೀವು ಒಂದು ಡೀಲ್ ಮಾಡಿ ಮಾರಿದ್ರೆ, ಬೇಜಾನ್ ಕಾಸು ಮಾಡಬಹುದು.
ಮಾಲೀಕ: ಬಿಡೀ ಸಾರ್ ಎಲ್ಲರೂ ನಂದಿ ಬೆಟ್ಟ ತೋರಿಸ್ತಾರೆ
ಸೇಲ್ಸ್ ಮ್ಯಾನ್: ಮಾರ್ಕೆಟ್ಟಲ್ಲಿ ಹೆಚ್ಚಾಗಿ ಓಡ್ತಿರೋ ಬ್ರಾಂಡ್ ಇದೇ ಸಾರ್.
ಗಿರಾಕಿ: ಅಯ್ಯೋ ಬಿಡಿ, ಕಿಲಾಡಿ ಪಂಟರು ನೀವು, ಕಿವೀಗೆ ಲಾಲ್ ಬಾಗ್ ನ್ನೇ ಇಡ್ತೀರಿ.
ಸ್ನೇಹಿತ 1: ತಿರಗಾ ತಲೆಗೆ ಹುಳ ಬಿಟ್ಟು ಅವನ ತಲೆ ಕೆಡಿಸಿದ
ಸ್ನೇಹಿತ 2: ಇಲ್ಲಾ ಮಗಾ, ಇಬ್ರಿಗೂ ತಲೆ ಇಲ್ಲ
ಸ್ನೇಹಿತ 1 : ಯಾಕಮ್ಮಾ, ಮಂಜ ಮೊಬೈಲ್ ಕೊಟ್ಟಿಲ್ವ ? ಸುಮ್ನೆ ಹೇಳಿ ಕಾಗೆ ಹಾರಿಸಿದನಾ ?
ಸ್ನೇಹಿತ 2 : ಇಲ್ಲಾ ಗುರೂ, ಸುಮ್ನೆ ಸ್ಟೋರಿ ಹೇಳಿ ಸ್ಟಂಟ್ ಹೊಡೆದು ಬಾವುಟ ಹಾರಿಸಿದ.
ನೋಡಿದಿರಾ, ಇದು ಬೆಂಗಳೂರಿನ 'ಬೆಂಗ್ಳೂರ್ ಭಾಷೆ'. ಎಲ್ಲಿಂದ ಬಂದರೂ ಕೆಲವೇ ದಿನಗಳಲ್ಲಿ ಎಲ್ಲರೂ ಇದಕ್ಕೆ ಹೊಂದಿಕೊಂಡು ಬಿಡುತ್ತಾರೆ. ಅವರು ಮಾತನಾಡುವ ಶೈಲಿಯೇ 'ಬೆಂಗ್ಳೂರು' ಶೈಲಿಯಾಗುತ್ತದೆ. ತಮ್ಮ ಮೂಲ ಭಾಷಾ ಶೈಲಿಯನ್ನು ಮಾತನಾಡಲು ತೀರಾ ಕಷ್ಟ ಪಡಬೇಕಾಗುತ್ತದೆ.
ಒಟ್ಟಿನಲ್ಲಿ ಈ 'ಬೆಂಗ್ಳೂರ್ ಭಾಷೆ'ಗೆ ತನ್ನದೇ ಆದ 'ಸ್ಕೋಪ್' ಇದ್ದೇ ಇದೆ !
__________________________________________________________________________________
- ರಾಘವೇಂದ್ರ ಅಡಿಗ ತೀರ್ಥಹಳ್ಳಿ, ಬೆಂಗಳೂರು
Saturday, August 27, 2011
Aravind Kejriwal
Aravind Kejriwal-(Born-16.06.1968-Hiss ar(Haryana).Member of Right to Information Movement.Joined Tata Steel (IIT Kharagpur).After quitting, working with Mother Teresa,Ramakrishna Mission & Nehru Yuva Kendra.Joined Indian Revenue Service(IRS-1995) & worked as ‘Additional Commissioner of Income Tax-Delhi’(at the age of 27).Quit the job & joined ‘India Against Corruption’,which is fighting for ‘Jan-Lokpal Bill’.
Monday, July 18, 2011
ಯಕ್ಷಗಾನ : 'ಶಲ್ಯಪರ್ವ ಸಹಿತ ಗದಾಯುದ್ದ' ಹಾಗೂ 'ರಕ್ತರಾತ್ರಿ ಮತ್ತು ಮಾರುತಿ ಪ್ರತಾಪ' : 06.08.2011, ಬೆಂಗಳೂರು
ಕಾಳಿಂಗ ನಾವಡ ಪ್ರತಿಷ್ಥಾನ (ರಿ) - ಶೃಂಗೇರಿ ಸಹಾಯಾರ್ಥ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ಸಂಯೋಜನೆಯಲ್ಲಿ 06 .08 .2011 ರ ಶನಿವಾರ ರಾತ್ರಿ 10 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಶೇಷಾದ್ರಿ ಚಿಕ್ಕಳೂರು ಸಮರ್ಪಿಸುವ 'ಶಲ್ಯಪರ್ವ ಸಹಿತ ಗದಾಯುದ್ದ' ಹಾಗೂ 'ರಕ್ತರಾತ್ರಿ ಮತ್ತು ಮಾರುತಿ ಪ್ರತಾಪ' ಎಂಬ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.
ಟಿಕೆಟ್ (ರೂ. 200 ಮತ್ತು ರೂ. 100-ಬಾಲ್ಕನಿ) ಹಾಗೂ ಇತರ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್ – 94481 01708
ಟಿಕೆಟ್ (ರೂ. 200 ಮತ್ತು ರೂ. 100-ಬಾಲ್ಕನಿ) ಹಾಗೂ ಇತರ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್ – 94481 01708
Yakshagana Cultural Event ‘Shalyaparva-Gadayudda & Raktaratri & Maruti Pratapa’ will be held at Raveendra Kalakshetra, J C Road on 06.08.2011, Saturday from 10pm onwards, organised by Kalinga Navada Prathisthana, Sringeri under the Direction of Sri Subramanya Dhareshwara & Director Sri Ramesh Begar in association with ‘Perduru Yakshagana Mela’ & Gust Artists, presented by Sri Sheshadri Chikkaluru.
For Tickets (Price Rs. 200 & Rs. 100-Balcony) and other details please contact Sri Ramesh Begar-94481 01708
ಧನ್ಯವಾದಗಳೊಂದಿಗೆ,
ರಾಘವೇಂದ್ರ ಅಡಿಗ ತೀರ್ಥಹಳ್ಳಿ, ಬೆಂಗಳೂರು
Wednesday, April 13, 2011
Sunday, April 3, 2011
Thursday, March 31, 2011
Friday, March 25, 2011
Monday, March 21, 2011
Padmabhushana Padmashree Dr. S P Balasubramanyam
Padmabhushana Padmashri Dr. Sripathi Panditaradhyula Balasubrahmanyam (born on 4th June 1946, Konetammapeta, Nellore district, Andhra Pradesh) is not only a Legendary Singer, but also a Producer, Actor, Voice Actor, Mimicry Artist & Music Director. Balasubrahmanyam was born in a Telugu Brahmin family to S. P. Sambamurthy. His wife is Smt. Savitri. He has two brothers and five sisters. He is the elder brother of the well-known singer S.P. Sailaja. Balasubrahmanyam has a daughter, Pallavi, and a son, S. P. B. Charan. He is also popularly known as S. P. B. and Balu. Since 1966 he has sung 40,000+ songs (6,000+ Songs in Kannada) in more than fifteen different Indian languages, and still singing, including Telugu, Tamil, Kannada, Hindi, Malayalam, Marathi, English, Bengali, Oriya, Punjabi, Tulu, Sanskrit, Assamese, Konkani, Badaga and Gondi. He already entered The Guinness Book of World Records for recording the most number of songs by a Male Singer. He has won the National Film Award for Best Male Playback Singer Six times. He is a recipient of prestigious civilian awards such as the Padma Bhushan in 2011 and the Padmashri in 2001.
Balasubrahmanyam has also provided voice-overs for various artists, including Kamal Haasan, Salman Khan, K. Bhagyaraj, Mohan, Anil Kapoor, Girish Karnad, Gemini Ganesan, Nagesh, Karthik, Raghuvaran, Rajinikanth, and Vinod Kumar in various languages. He was assigned as the default dubbing artist for Kamal Hassan’s many Telugu movies dubbed from Tamil. He was awarded "Best Dubbing Artist" for dubbing for Suman in the film Annamayya.
Apart from all these he is a great, nice, gentle, humble human being in this Planet.
For More Details about Dr. SPB click - http://en.wikipedia.org/wiki/S._P._Balasubrahmanyam
- Raghavendra Adiga Thirthahalli
Monday, February 14, 2011
Thursday, February 10, 2011
Sarvarigu Shikshana: Welcome to All
Sarvarigu Shikshana: Welcome to All: "Dear Friends, Let us talk about Child Rights,Right to Education and focus on Deprived Children....i welcome ur Right Comments...."
-----------------------------------------------------------------------------------------------------------------------------------
-----------------------------------------------------------------------------------------------------------------------------------
Education is the key to breaking the vicious cycle of poverty. Once people can read, they can vote. Once people can add and do basic math, they can run a business effectively. Education allows people to be more productive, earn better wages, protect their health and have a voice in their society. ‘Education to All’ is one of the good social welfare project of the Government. Hope that India will become one of the Best Educated Country of the World.
All the Best for the Project….
Subscribe to:
Posts (Atom)